Mr. T. Ramesh, CGM, NABARD Karnataka, visited Talipady Weavers Society on 29/07/2022. He interacted with the weavers trained by Kadike Trust with the NABARD support. He explained about the success of SHG groups initiated by the NABARD and encouraged women weavers to form their own SHG group and avail the benefits. He appreciated the revival work taken up by the Kadike Trust and assured full support from the NABARD in future. Ms Sangeetha Kartha DDM NABARD accompanied him. Representatives of Kadike Trust and Talipady Weavers Society were present.
ದಿನಾಂಕ 29/07/2022 ರಂದು ಶ್ರೀ ಟಿ ರಮೇಶ್, ಸಿ ಜಿ ಎಂ, ನಬಾರ್ಡ್ ಕರ್ನಾಟಕ ಇವರು ತಾಳಿಪಾಡಿ ನೇಕಾರ ಸಂಘ ಕಿನ್ನಿಗೋಳಿಗೆ ಭೇಟಿ ನೀಡಿದರು. ಕದಿಕೆ ಟ್ರಸ್ಟ್, ನಬಾರ್ಡ್ ಬೆಂಬಲದೊಂದಿಗೆ ತರಬೇತಿ ನೀಡಿದ ನವ ನೇಕಾರರೊಡನೆ ಸಂವಹನ ನಡೆಸಿದರು . ನಬಾರ್ಡ್ ಆರಂಭಿಸಿದ ಸ್ವ ಸಹಾಯ ಸಂಘಗಳ ಯಶಸ್ಸಿನ ಬಗ್ಗೆ ವಿವರಿಸಿದ ಅವರು , ಮಹಿಳಾ ನೇಕಾರರಿಗೆ ತಮ್ಮದೇ ಆದ ಸ್ವ ಸಹಾಯ ಸಂಘವನ್ನು ಸ್ಥಾಪಿಸಿ ಅದರ ಪ್ರಯೋಜನವನ್ನು ಪಡೆಯಲು ಕರೆ ನೀಡಿದರು. ಕದಿಕೆ ಟ್ರಸ್ಟ್ ನ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನದ ಕೆಲಸವನ್ನು ಶ್ಲಾಘಿಸಿ ಮುಂದೆ ಟ್ರಸ್ಟ್ ನಡೆಸುವ ಯಾವುದೇ ಕೆಲಸಕ್ಕೆ ನಬಾರ್ಡ್ ಬೆಂಬಲ ನೀಡುವುದಾಗಿ ತಿಳಿಸಿದರು.
ನಬಾರ್ಡ್ ದ ಕ ,ಉಡುಪಿ ಜಿಲ್ಲಾ ಡಿ ಡಿ ಎಂ ಸಂಗೀತಾ ಕರ್ತ ಅವರು ಸಿ ಜಿ ಎಂ ಅವರ ಭೇಟಿಯಲ್ಲಿ ಜೊತೆಗಿದ್ದರು.ನೇಕಾರ ಸಂಘದ ಮತ್ತು ಕದಿಕೆ ಟ್ರಸ್ಟ್ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.